SANDALWOOD SUDDI :
KANNADA CINEMA ADDA - KING OF ONLINE PROMOTIONS
Thursday, 25 August 2016
ಹುಡುಗರು ಚಿತ್ರದ ನಂತರ ಮತ್ತೊಂದು ಮಹತ್ವಾಕಾಂಕ್ಷೆಯ ಪಾತ್ರದಲ್ಲಿ ಲೂಸ್ ಮಾದ ಯೋಗೀಶ್ ದುನಿಯಾ ಚಿತ್ರದಲ್ಲಿ ಲೂಸ್ ಮಾದ ಎಂಬ ಸಣ್ಣ ಪಾತ್ರದಲ್ಲಿ ಅಭಿನಯಿಸಿ ಅದೇ ಹೆಸರಿನಲ್ಲಿ ಚಿತ್ರರಂಗದಲ್ಲಿ ಖ್ಯಾತಿ ಪಡೆದ ನಟ ಯೋಗೀಶ್. ಹಲವು ವಿಭಿನ್ನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಅವರ ಹುಡುಗರು ಚಿತ್ರದ ಅಭಿನಯ ಇಂದಿಗೂ ಖುಷಿನೀಡುತ್ತೆ. ಆ ಚಿತ್ರದಲ್ಲಿ ವಿಲನ್ ಗಳಿಂದ ಹೊಡೆತ ತಿಂದು ಕಿವುಡನಾಗಿ ಅಭಿನಯಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಹಾಗೂ ಶ್ರೀನಗರ ಕಿಟ್ಟಿ ಅವರುಗಳು ಇದ್ದರು ಇವರ ಪಾತ್ರ ತಮಾಷೆಯಾಗಿ ಸಾಗುತ್ತೆ. ಆ ಚಿತ್ರದ ನಂತರ ಮತ್ತೊಂದು ಮಹತ್ವಾಕಾಂಕ್ಷೆಯ ಪಾತ್ರವನ್ನು ಜಾನ್ ಜಾನಿ ಜನಾರ್ಧನ್ ಚಿತ್ರದಲ್ಲಿ ಮಾಡಿದ್ದಾರೆ.ಸಖತ್ ಸ್ಟೈಲ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಯೋಗೀಶ್ ಅಂಗವಿಕಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಸಹ ಮಲ್ಟಿಸ್ಟಾರ್ ಚಿತ್ರವಾಗಿದ್ದು ಅಜಯ್ ರಾವ್ ಹಾಗೂ ಡಾರ್ಲಿಂಗ್ ಕೃಷ್ಣ ಅವರು ಸಹ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಜಾನ್ ಜಾನಿ ಜನಾರ್ಧನ್ ಚಿತ್ರದಲ್ಲಿನ ಯೋಗೀಶ್ ಪಾತ್ರ ಈವರೆಗಿನ ಚಿತ್ರಗಳಿಗಿಂತ ವಿಭಿನ್ನವಾಗಿರಲಿದೆ. ಈಗಾಗಲೇ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದು ಇದೇ ತಿಂಗಳು 31ರಂದು ಹಾಡುಗಳ ಬಿಡುಗಡೆಯಾಗಲಿವೆ. ಚಿತ್ರವು ಸದ್ಯದಲ್ಲೇ ತೆರೆಗೆ ಬರಲಿದೆ.
via Sandalwood Suddi : Kannada Cinema Adda http://ift.tt/2bkJRnx
No comments:
Post a Comment