Friday, 2 June 2017

#ದರ್ಶನ್ ಅವರ ಮನೆ ಹೆಸರು 'ಮುಪಾ ಕೃಪಾ' ಮೈಸೂರಿನಲ್ಲಿರುವ ದರ್ಶನ್ ಅವರ ಹಳೆಯ ಮನೆಯ ಹೆಸರು 'ಮುಪಾ ಕೃಪಾ'. ಮು ಅಂದ್ರೆ ಮುತ್ತುರಾಜ, ಪಾ ಅಂದರೆ ಪಾರ್ವತಮ್ಮ. ಇದು ಮೈಸೂರಿನ ಸಿದ್ದಾರ್ಥ ಬಡಾವಣೆಯಲ್ಲಿದೆ. ಇದನ್ನು ಪಾರ್ವತಮ್ಮ ರಾಜ್ ಕುಮಾರ್ ಕಟ್ಟಿಸಿಕೊಟ್ಟಿದ್ದು. ಮೈಸೂರಿನಲ್ಲಿ ಒಂದು ಮನೆ ಕಟ್ಟಬೇಕು ಎನ್ನುವುದು ತೂಗುದೀಪ ಶ್ರೀನಿವಾಸ ಅವರ ಆಸೆ ಆಗಿತ್ತು. ಆದ್ರೆ, ಆರ್ಥಿಕ ಸಮಸ್ಯೆಯಿಂದ ಇದು ಸಾಧ್ಯವಾಗಿರಲಿಲ್ಲ. ಈ ಸಮಯದಲ್ಲಿ ಡಾ.ರಾಜ್ ಕುಮಾರ್ ಅವರು ತೂಗುದೀಪ ಅವರಿಗೆ ಮನೆ ಕಟ್ಟಿಕೊಳ್ಳಲು ಆರ್ಥಿಕವಾಗಿ ಸಹಾಯ ಮಾಡಿದರಂತೆ.ರಾಜ್ ಕುಮಾರ್ ಹಾಗೂ #ಪಾರ್ವತಮ್ಮ_ರಾಜ್ ಕುಮಾರ್ ಅವರು ಮಾಡಿದ ಸಹಾಯಕ್ಕೆ ಪ್ರತೀಕವಾಗಿ, ತಾವು ಕಟ್ಟಿಸಿದ ಮನೆಗೆ ಅವರ ಹೆಸರನ್ನೇ ಇಡಲು ನಿರ್ಧರಿಸಿದರಂತೆ ತೂಗುದೀಪ ಶ್ರೀನಿವಾಸ್.ಇಂತಹಾ ನೂರಾರು ಸಹಾಯಗಳನ್ನು ಅಣ್ಣಾವ್ರ ಕುಟುOಬ ಮಾಡುತ್ತಲೇ ಬಂದಿದೆ ಆದರೆ ಪ್ರಚಾರದಿಂದ ದೂರ. ಕೃತಜ್ಞತೆಯ ಪ್ರತೀಕ ಈ ಮನೆ


via Sandalwood Suddi : Kannada Cinema Adda http://ift.tt/2s1WafV

No comments: